ಪರಂವಾ ಸ್ಟುಡಿಯೋಸ್ ಒಂದು ಭಾರತೀಯ ಚಲನಚಿತ್ರ ವಿತರಣಾ ಮತ್ತು ನಿರ್ಮಾಣ ಸ್ಟುಡಿಯೋ ಆಗಿದೆ.. ಇದು ಬೆಂಗಳೂರಿನ ನಾಗದೇವನಹಳ್ಳಿಯಲ್ಲಿದೆ . == ಸ್ಥಾಪನೆ == ಕನ್ನಡ ಚಿತ್ರೋದ್ಯಮದ ಹೆಸರಾಂತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರು 2015ರಲ್ಲಿ ತಮ್ಮ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಹಾಗೂ ಉಳಿದವರು ಕಂಡಂತೆ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದ ನಂತರ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲೆಂದು ಪರಂವಾ (ಪರಂವಃ) ಸ್ಟುಡಿಯೋಸ್ ಆರಂಭಿಸಿದರು. ಈ ಸ್ಟುಡಿಯೋವನ್ನು ಪುನೀತ್ ರಾಜ್‍ಕುಮಾರ್ ರವರು ಉದ್ಘಾಟಿಸಿದರು. == ನಿರ್ಮಾಣದ ಚಲನಚಿತ್ರಗಳು == == ಪ್ರಶಸ್ತಿಗಳು == ಕಿರಿಕ್ ಪಾರ್ಟಿ ಚಲನಚಿತ್ರವು ೨೦೧೭ ರಲ್ಲಿ ಬಿಡುಗಡೆಯಾದ ನಂತರ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಐಐಎಫ್ಎ ಉತ್ಸವಂ (ಮಾರ್ಚ್ 2017) - ಅತ್ಯುತ್ತಮ ಚಿತ್ರ, ಅತ್ಯುತ್ತಮ ನಾಯಕ ಪಾತ್ರ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು (ಏಪ್ರಿಲ್ 2017) - ಜನಪ್ರಿಯ ಮನರಂಜನಾ ಚಲನಚಿತ್ರ . ಫಿಲ್ಮ್ ಫೇರ್ ಪ್ರಶಸ್ತಿಗಳು ದಕ್ಷಿಣ (ಜೂನ್ 2017) - ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ . ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (ಜುಲೈ 2017) - ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಚೊಚ್ಚಲ ನಟಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಗೀತರಚನೆಕಾರ, ವರ್ಷದ ಮನರಂಜಕ . == ಉಲ್ಲೇಖಗಳು ==